ಇರ್ಕೂಟ್ಸ್‍ಕ್
ಪೂರ್ವ ಸೈಬೀರಿಯದ ಪುರಾತನ ಹಾಗೂ ಅತಿ ದೊಡ್ಡ ಪಟ್ಟಣಗಳಲ್ಲಿ ಒಂದು. ಮುಖ್ಯ ವಿದ್ಯಾಕೇಂದ್ರವೂ ಆಗಿದೆ. ಬೈಕಲ್ ಸರೋವರದ ವಾಯುವ್ಯಕ್ಕೆ 30 ಮೈ. ದೂರದಲ್ಲಿದೆ. ಟ್ರಾನ್ಸ್-ಸೈಬೀರಿಯ ರೈಲುಮಾರ್ಗದ ಒಂದು ಪ್ರಮುಖ ಕೇಂದ್ರ. ವಾರ್ಷಿಕ ಮಳೆ 15". ಜನವರಿಯಲ್ಲಿ ಸರಾಸರಿ ಉಷ್ಣಾಂಶ-60 ಫ್ಯಾ. ವಾಯುವ್ಯ ಪ್ರದೇಶದಲ್ಲಿ ಅಧಿಕ ಪ್ರಮಾಣದ ಕಲ್ಲಿದ್ದಲಿನ ನಿಕ್ಷೇಪ ಕಂಡುಬಂದಿದೆ. ಸುತ್ತಲೂ ಅಗಾಧವಾದ ಮೊನಚಾದ ಎಲೆಯುಳ್ಳ ಕಾಡುಗಳು ಆವರಿಸಿ ನಗರದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿವೆ. ವಿಮಾನ, ಕಾರು, ಗಣಿ ಉದ್ಯಮಗಳು ಮುಖ್ಯವಾಗಿವೆ. 									
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ